HOMENews

ಮೈಸೂರಿನಲ್ಲಿ ಗೂಂಡಾ ಕಾಯ್ದೆಯಲ್ಲಿ ರೌಡಿಶೀಟರ್ ಬಂಧನ; ಆರೋಪಿಗೆ ಗಡಿಪಾರು

 

ಮೈಸೂರು: ನಗರದಲ್ಲಿ ಅಕ್ರಮ ಹಾಗೂ ರೌಡಿ ಚಟುವಟಿಕೆಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಮೈಸೂರು ನಗರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕರ್ನಾಟಕ ಗೂಂಡಾ ಕಾಯ್ದೆ ಅಡಿಯಲ್ಲಿ ರೌಡಿಶೀಟರ್ ಒಬ್ಬನನ್ನು ಬಂಧಿಸಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದು, ಮತ್ತೊಬ್ಬ ಎನ್ಡಿಪಿಎಸ್ ಆರೋಪಿಯನ್ನು ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ರೌಡಿಯನ್ನುಗಡಿಪಾರು ಮಾಡಿದ್ದಾರೆ.

ಮೈಸೂರು ನಗರದ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಬಡಾವಣೆ ನಿವಾಸಿ ಗಣೇಶ್ @ ಗಣಪ (25) ಎಂಬ ರೌಡಿಶೀಟರ್ ವಿರುದ್ಧ ಕರ್ನಾಟಕ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧನ ವಾರೆಂಟ್ ಹೊರಡಿಸಲಾಗಿತ್ತು. ಚಾಲಕ ಹಾಗೂ ಶುಭ ಸಮಾರಂಭ ಗಳಿಗೆ ಶಾಮಿಯಾನ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಮತ್ತೆ ಮತ್ತೆ ಸಾರ್ವಜನಿಕರಿಗೆ ಭಯ ಪಡಿಸುವುದ ಧಮಕಿ ಹಾಕುವುದು ಹಾಗೂ ಹೊಡೆದಾಟ, ಹಲ್ಲೆ, ಮಾರಣಾಂತಿಕ ಹಲ್ಲೆ ಸೇರಿದಂತೆ ಇನ್ನೂ ಗಂಭೀರ ಅಪರಾಧಗಳಲ್ಲಿ ಕೃತ್ಯದಲ್ಲಿ ತೊಡಗಿದನೆಂದು ಮೈಸೂರು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ . ಈ ವ್ಯಕ್ತಿಯ ವಿರುದ್ಧ ವಿದ್ಯಾರಣ್ಯಪುರಂ ಠಾಣೆಯಲ್ಲಿ 3 ಪ್ರಕರಣಗಳು, ಕೃಷ್ಣರಾಜ ಠಾಣೆಯಲ್ಲಿ 1, ಟಿ.ನರಸೀಪುರ ಠಾಣೆಯಲ್ಲಿ 1 ಹಾಗೂ ಇಲವಾಲ ಠಾಣೆಯಲ್ಲಿ 1 ಪ್ರಕರಣ ಸೇರಿ ಒಟ್ಟು 6 ಪ್ರಕರಣಗಳು ದಾಖಲಾಗಿವೆ. ಜೊತೆಗೆ ಎರಡು (Non-cognizable offence) ಅಸಂಜ್ಞೇಯ ಪ್ರಕರಣಗಳೂ ಈ ವ್ಯಕ್ತಿಯ ವಿರುದ್ದ ದಾಖಲಾಗಿವೆ.

ಇದನ್ನೂ ಓದಿ :- ಬನ್ನೂರಿನಲ್ಲಿ ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ: ಕಬ್ಬು ಬೆಳೆಗಾರರಿಂದ  ಶಾಂತಿಯುತ ಪ್ರತಿಭಟನೆ

ಸಾರ್ವಾಜನಿಕ ಸಮಾಜದಲ್ಲಿ ಈತ ಭಯದ ವಾತಾವರಣ ಸೃಷ್ಟಿಸುತ್ತಿದ್ದ ಈತನ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತರು ಫೆಬ್ರವರಿ 14ರಂದು ಬಂಧನ ವಾರೆಂಟ್ ಹೊರಡಿಸಿದ್ದರು. ಅದರ ಮೇರೆಗೆ ಫೆಬ್ರವರಿ 15ರಂದು ಪೊಲೀಸರು ಈತನನ್ನು ದಸ್ತಗಿರಿ ಮಾಡಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.

ಇದಲ್ಲದೆ, ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ @ ತೋಟಿ ಮಂಜ @ ಅಸ್ಲಂ (51) ಎಂಬ ವ್ಯಕ್ತಿಯನ್ನು ಕರ್ನಾಟಕ ಪೊಲೀಸ್ ಕಾಯ್ದೆ 1965ರ ಕಲಂ 55ಎ ಅಡಿಯಲ್ಲಿ ಆರು ತಿಂಗಳ ಕಾಲ ಗಡಿಪಾರು ಮಾಡಲು ಆದೇಶಿಸಲಾಗಿದೆ. ಈತನು ಮೈಸೂರು ನಗರದ ಕೆ.ಎಸ್.ಪುರ ಹಾಗೂ ಕೆ.ಎನ್.ಪುರ ಪ್ರದೇಶಗಳಲ್ಲಿ ವಾಸವಾಗಿದ್ದು, ಗಾಂಜಾ ಮಾದಕ ವಸ್ತು ಮಾರಾಟ ಹಾಗೂ ಸಾಗಾಟ ಪ್ರಕರಣಗಳಲ್ಲಿ ಪದೇಪದೇ ಭಾಗಿಯಾಗಿದ್ದನೆಂದು ಆರೋಪಿಸಲಾಗಿದೆ.

ಇದನ್ನೂ ಓದಿ :- ಮಗುವಿನ ಕುತ್ತಿಗೆಯಿಂದ ಸರ ಕಿತ್ತು ನುಂಗಿದ ಆರೋಪಿ ಆಸ್ಪತ್ರೆಯಲ್ಲಿ ನಿಗಾ

ಈತನ ವಿರುದ್ಧ ಉದಯಗಿರಿ, ಲಷ್ಕರ್ ಹಾಗೂ ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೊಲೀಸ್ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಮೂರು ಪ್ರಕರಣಗಳು ದಾಖಲಾಗಿವೆ. ಜೊತೆಗೆ ಹಿಂದಿನ ವರ್ಷಗಳಲ್ಲಿ ಮನೆಗಳ್ಳತನ ಹಾಗೂ ಕನ್ನಕಳವು ಪ್ರಕರಣಗಳಲ್ಲಿ ಸಹ ಭಾಗಿಯಾಗಿದ್ದ ಆರೋಪಗಳಿವೆ. ಸರಸ್ವತಿಪುರಂ, ವಿದ್ಯಾರಣ್ಯಪುರಂ, ಕುವೆಂಪುನಗರ, ವಿಜಯನಗರ ಹಾಗೂ ಮಂಡ್ಯ ಗ್ರಾಮಾಂತರ ಠಾಣೆಗಳಲ್ಲಿ ಈ ಸಂಬಂಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಈತನ ಅಕ್ರಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಗಡಿಪಾರು ಆದೇಶ ಹೊರಡಿಸಿದ್ದು, ಅದರ ಮೇರೆಗೆ ಫೆಬ್ರವರಿ 15ರಂದು ಬಂಧಿಸಿ ಶಿವಮೊಗ್ಗ ಜಿಲ್ಲೆ ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ನಗರದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಮುಂದುವರೆಸಿದ್ದು, ರೌಡಿಶೀಟರ್ಗಳು ಹಾಗೂ ಮಾದಕ ವಸ್ತು ವ್ಯಾಪಾರದಲ್ಲಿ ತೊಡಗುವವರಿಗೆ ಇದು ಸ್ಪಷ್ಟ ಎಚ್ಚರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿವೈಡರ್ ಹಾರಿ KSRTC ಬಸ್ಸಿಗೆ ನೆಲಮಂಗಲ ಬಳಿ ಗುದ್ದಿದ ಕಾರು: ಐದು ಜನರ ಸಾ*

Leave a Response