HOMENews

ಪರಿಶಿಷ್ಟ ಜಾತಿಯ ಬಲಗೈ ವರ್ಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು: ಮಾಜಿ ಸದಸ್ಯ ಅಚ್ಚುತಾನಂದ

 

ವರದಿ:-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಫೆ. 27:- ಪರಿಶಿಷ್ಟ ಜಾತಿಯ ಬಲಗೈ ವರ್ಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಈಗ ಜಾರಿಗೆ ತಂದಿರುವ ವರದಿಯನ್ನು ರದ್ದುಪಡಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಚ್ಚುತಾನಂದ ಸರ್ಕಾರವನ್ನು ಅಗ್ರಹಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದಿಂದ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿಯ ನೂರೆಂದು ಜಾತಿಗಳ ಸಮೀಕ್ಷೆಯು ಅವಜ್ಞಾನಿಕತೆಯಿಂದ ಕೂಡಿದ್ದು ಇದನ್ನು ರದ್ದುಪಡಿಸಿ ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ ಬಲಗೈ ವರ್ಗಕ್ಕೆ 19 ಜಾತಿಗಳು ಹಾಗೂ ಆದಿ ಆಂದ್ರ ಆದಿ ದ್ರಾವಿಡ ಆದಿ ಕರ್ನಾಟಕ ಮತ್ತು ಛಲವಾದಿ ಜನರಿಗೆ ಸಾಮಾಜಿಕವಾಗಿ ಅನ್ಯಾಯವಾಗುತ್ತಿದ್ದು ಅಲ್ಲದೆ ಈ ವರದಿಯು ರಾಜ್ಯಪಾಲರಿಂದ ತಿರಸ್ಕೃತವಾಗಿ ಸರ್ಕಾರಕ್ಕೆ ವಾಪಸ್ ಆಗಿದ್ದರು ಮತ್ತೆ ರಾಜ್ಯಪಾಲರ ಬಳಿ ಹೋಗಿದೆ ಅಲ್ಲದೇ ಈ ನಡುವೆ ನ್ಯಾಯಾಲಯದಲ್ಲಿ ಮೀಸಲು ಪ್ರಮಾಣವನ್ನು ಪ್ರಶ್ನಿಸಿದೆ ಈ ಎಲ್ಲಾ ಗೊಂದಲಗಳು ಬಗೆಹರಿಯುವ ತನಕ ಮತ್ತು ರಾಜ್ಯದಲ್ಲಿ ಜಾತಿಗಣತಿಯನ್ನು ಪುನರ್ ಮಾಡುವ ತನಕ ತಡೆ ಹಿಡಿಯಬೇಕೆಂದು ಒತ್ತಾಯಿಸಿದರು.

ಒಳ ಮೀಸಲಾತಿ ವರ್ಗೀಕರಣ: ಬಲಗೈ ಸಮುದಾಯಕ್ಕೆ ಅನ್ಯಾಯ -: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಒಳ ಮೀಸಲಾತಿ ವರ್ಗೀಕರಣದಲ್ಲಿ ಬಲಗೈ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದ್ದು ಒಳ ಮೀಸಲಾತಿ ಹಂಚಿಕೆಯಲ್ಲಿ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸದೆ ಬಲಗೈ ಸಮುದಾಯವನ್ನು ಕಡೆಗಣಿಸಲಾಗಿದೆ. ಇದು ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಸರ್ಕಾರ ಕೂಡಲೇ ಈ ತಾರತಮ್ಯವನ್ನು ಸರಿಪಡಿಸಬೇಕು ಎಂದು ಎಚ್ಚರಿಸಿದರು.

ಇದಕ್ಕೂ ಮೊದಲು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಯು ತಾನಂದರ ನೇತೃತ್ವದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಪ್ರತಿಮೆ ಬಳಿ ನೂರಾರು ಜನ ಸಭೆ ಸೇರಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮೈಸೂರು ಹಾಸನ ರಸ್ತೆಯ ಮೂಲಕ ಕೃಷ್ಣರಾಜೇಂದ್ರ ಒಡೆಯರ್ ವೃತ್ತ ಮತ್ತು ಪುರಸಭೆಯ ವೃತ್ತ ಸೇರಿದಂತೆ ಹಲವು ಕಡೆ ಮಾನವ ಸರಪಣಿ ನಿರ್ಮಿಸಿ ರಸ್ತೆ ತಡೆಯನ್ನು ನಡೆಸಿದರು.

ಅಲ್ಲಿಂದ ಮಿನಿ ಆಡಳಿತ ಸೌಧದ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ ರಸ್ತೆ ಯುದ್ಧಕ್ಕೂ ಬೇಕೇ ಬೇಕು ನ್ಯಾಯ ಬೇಕು ಅನ್ಯಾಯ ಅನ್ಯಾಯ ಪರಿಶಿಷ್ಟ ಜಾತಿಯ ಬಲಗೈ ಪಂಗಡಕ್ಕೆ ಅನ್ಯಾಯ ಧಿಕ್ಕಾರ ಧಿಕ್ಕಾರ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವ ಸಂಪುಟದ ಸದಸ್ಯರುಗಳಿಗೆ ಧಿಕ್ಕಾರ ನ್ಯಾಯಮೂರ್ತಿ ಡಾ. ಹೆಚ್ ಎನ್ ನಾಗಮಹನ್ ದಾಸ್ ರವರಿಗೆ ಧಿಕ್ಕಾರ .ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಮುದಾಯಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಣೆಗಳನ್ನು ಕೂಗುತ್ತಾ ಪ್ರತಿಪಟಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು

ಮನವಿ ಸಲ್ಲಿಕೆ:-

ಪ್ರತಿಭಟನೆಯ ನಂತರ, ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ತಹಸಿಲ್ದಾರ್ ಅವರಿಗೆ ಸಲ್ಲಿಸಿ ತಾಲೂಕ್ ಆಡಳಿತದ ಮೂಲಕ ಸರ್ಕಾರಕ್ಕೆ . ತಮ್ಮ ಅಹವಾಲನ್ನು ತಲುಪಿಸುವಂತೆ ಮುಖಂಡರು ಮುಖಂಡರು ತಿಳಿಸಿದರು ಈ ಮನವಿಯನ್ನು ಸರ್ಕಾರಕ್ಕೆ ಕಳಿಸಿ ಕೊಡುವುದಾಗಿ ತಹಸಿಲ್ದಾರ್ ತಿಳಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಮುಖಂಡ ಹನಸೋಗೆ ನಾಗರಾಜ್ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಂಗೂರುಬಾಯಿನಲ್ಲಿ ತಮ್ಮಣ್ಣ ಉಪನ್ಯಾಸಕ ಕೃಷ್ಣ ಪುರಸಭಾ ಮಾಜಿ ಅಧ್ಯಕ್ಷ ಗೀತಾ ಮಹೇಶ್ ಕಳ್ಳಿ ಮುದ್ದನಹಳ್ಳಿ ಚಂದ್ರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಪತ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಚಂದಗಾಲ್ ಮೂರ್ತಿ ಹಂಪಾಪುರ ಸುರೇಶ್ ಕೀರ್ತಿಪ್ರಸಾದ್ . ಹರೀಶ ರಾಮಕೃಷ್ಣ ಚೆಲುವರಾಜ್ ರಾಮಯ್ಯ ಮುತ್ತು ಮನು ರಾಮಕೃಷ್ಣ ಚಂದ್ರಯ್ಯ ರಾಜಣ್ಣ ಸೇರಿದಂತೆ ನೂರಾರು ದಲಿತ ಮುಖಂಡರು ಹಾಗೂ ಸಮುದಾಯದ ಯುವಕರು ಪಾಲ್ಗೊಂಡಿದ್ದರು.

Leave a Reply