News

News National and International

HOMENews

 ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಗುದ್ದಲಿ ಪೂಜೆ 

ಮೈಸೂರು :- ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿರುವ 50.00 ಕೋಟಿ ರೂಪಾಯಿಗಳ ಅನುದಾನದಡಿ ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ-5 ರ ವಾರ್ಡ್ ನಂ.1 – ಲಕ್ಷ್ಮೀಕಾಂತನಗರ ವ್ಯಾಪ್ತಿಯಲ್ಲಿ ಅಂದಾಜು ರೂ. 6.19 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ *ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡರು ಗುದ್ದಲಿ ಪೂಜೆ ನೆರವೇರಿಸಿದರು, ಕಾಮಗಾರಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ. 1ರ ಸುಬ್ರಮಣ್ಯ ನಗರದ ಹಳೇ ಪೊಲೀಸ್ ಸ್ಟೇಷನ್ ಹಿಂಭಾಗದ ರಸ್ತೆ ಮತ್ತು ಅಡ್ಡ ರಸ್ತೆಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಸುಬ್ರಮಣ್ಯ ದೇವಸ್ಥಾನದ ಅಡ್ಡ ರಸ್ತೆಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಹೆಬ್ಬಾಳ್ 1ನೇ ಹಂತದ ರಸ್ತೆಗಳ ಮತ್ತು ಚರಂಡಿ ಅಭಿವೃದ್ಧಿ, ಹೆಬ್ಬಾಳ್ 2ನೇ ಹಂತದ ಮಯೂರ ವೃತ್ತ ಮತ್ತು ಕಾವೇರಿ ವೃತ್ತದ ಅಡ್ಡ ರಸ್ತೆಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಮೂಡ ಪಾರ್ಕ್ ಪಕ್ಕದ ಹಾಗೂ ಅಡ್ಡ ರಸ್ತೆಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಲಕ್ಷ್ಮೀಕಾಂತನಗರದ ನಿಸರ್ಗ ಬಡಾವಣೆಯ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಲಕ್ಷ್ಮೀಕಾಂತನಗರದ ಎಲ್.ಐ.ಜಿ ಮನೆಗಳ ಮುಂಭಾಗ ಕಾಂಕ್ರೀಟ್ ರಸ್ತೆ, ಚರಂಡಿ ಮತ್ತು ಡೆಕ್ ಸ್ಲ್ಯಾಬ್ ನಿರ್ಮಿಸುವ ಕಾಮಗಾರಿ, ಲಕ್ಷ್ಮೀಕಾಂತನಗರದ ಪ್ರಶಾಂತ ಗಣಪತಿ ದೇವಸ್ಥಾನ ಹಿಂಭಾಗದ ಮತ್ತು ಅಕ್ಕ ಪಕ್ಕದ ರಸ್ತೆಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಹಾಗೂ ಮಾರಮ್ಮ ದೇವಸ್ಥಾನದ ಅಕ್ಕ ಪಕ್ಕದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ,ಯು.ಜಿ.ಡಿ. ಕಾಮಗಾರಿ ಮಾರಿಗುಡಿ ದೇವಸ್ಥಾನದ ರಸ್ತೆ, ಮಾನಸ ಭಂಡಾರ ಹತ್ತಿರದ ಅಡ್ಡ ರಸ್ತೆಗಳಲ್ಲಿ ಮತ್ತು ಮುಖ್ಯ ರಸ್ತೆಯಲ್ಲಿ, ಹೆಬ್ಬಾಳ್ 1ನೇ ಹಂತದ ಸುಬ್ರಮಣ್ಯನಗರದ ಆಯ್ದ ಅಡ್ಡ ರಸ್ತೆಗಳಲ್ಲಿ, ಲಕ್ಷ್ಮೀಕಾಂತನಗರದ ಇ.ಡಬ್ಲ್ಯೂಎಸ್ ರಸ್ತೆಯಲ್ಲಿ ಮತ್ತು ಲಕ್ಷ್ಮೀಕಾಂತನಗರ ಗಣಪತಿ ದೇವಸ್ಥಾನ ಹತ್ತಿರ ಒಳಚರಂಡಿ ಕೊಳವೆಮಾರ್ಗ ಅಳವಡಿಸಿ ಯಂತ್ರಗುಂಡಿಗಳನ್ನು ನಿರ್ಮಿಸುವ ಕಾಮಗಾರಿಯಾಗಿದೆ, ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾದ ರವಿ ಮಂಚೇಗೌಡನ ಕೊಪ್ಪಲು, ದೇವರಾಜ ಬ್ಲಾಕ್ ಅಧ್ಯಕ್ಷರಾದ ಡಿ ನಾಗಭೂಷಣ್, ವಾರ್ಡ್ ಅಧ್ಯಕ್ಷರಾದ ಜಗದೀಶ್, ಗೀತಾ, ಎಂ.ಎಂ. ಸಿ ನಾಮ ನಿರ್ದೇಶಿತ ಸದಸ್ಯೆ ತನುಜಾ ಮಹೇಶ್,ಮುಖಂಡರಾದ ರಾಮಚಂದ್ರು, ರಮೇಶ್, ಡಿಕ್ಸಿ ಮೋಹನ್,ಡೈರಿ ರಮೇಶ್, ಮಹೇಶ್ ಮಸಿಯಪ್ಪ, ಚಂದ್ರು ಕಾಂತಣ್ಣ , ವಿಜಿ, ವೆಂಕಟೇಶ್,  ಸೇರಿದಂತೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಭಾಗಿಯಾಗಿದ್ದರು.

1 14 15 16 17 18 41
Page 16 of 41