News

ಅನುದಾನ ಯಾವುದೇ ಇರಲಿ ಜನಪ್ರತಿನಿಧಿಗಳಾದ ನಾವು ಯಾವುದೇ ತಾರತಮ್ಯ ಮಾಡದೆ ಕೆಲವು ಪರ ವಿರೋದೆರುವುದು ಸಹಜ : ಸಿ.ಎನ್ ಮಂಜೇಗೌಡ

 

ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಜ. 31:- ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಿಂದ ನಿರ್ಮಿಸಿದ ಗ್ರಾಮ ಪಂಚಾಯಿತಿಯ ಮೇಲಂತಸ್ತಿನಾ ಕಟ್ಟಡವನ್ನು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಆದೇಶದಂತೆ ಇಂದು ನಾನು ಉದ್ಘಾಟನೆ ಮಾಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿಎನ್ ಮಂಜೇಗೌಡ ತಿಳಿಸಿದರು.

ಮಿರ್ಲೆ ಗ್ರಾಮದಲ್ಲಿ ಮಿರ್ಲೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿಯ ಮೇಲಂತಸ್ತಿನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಇನ್ನೊಂದು ವಾರದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರ ಅಧಿಕಾರ ಅಂತ್ಯಗೊಳ್ಳಲಿದ್ದು ಆದುದರಿಂದ ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕರಾದ ಡಿ ರವಿಶಂಕರ್ ಬರುವ ನಿರೀಕ್ಷೆ ಇತ್ತು ಆದರೆ ಅವರು ಸಹ ಕಾರ್ಯಕ್ರಮಕ್ಕೆ ಗೈರಾಗಿರುವ ಬಗ್ಗೆ ನಾನು ಪಂಚಾಯಿತಿಗೆ ಬಂದ ಮೇಲೆ ತಿಳಿಯಿತು ಎಂದು ತಿಳಿಸಿದರು.

ಆದರೆ ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅಥವಾ ತಾಲೋಕ್ ಪಂಚಾಯಿತಿ ಇಓ ಯಾವುದೇ ಮಾಹಿತಿಯನ್ನು ನೀಡಿಲ್ಲ ಆದರೆ ಕಾರ್ಯಕ್ರಮಕ್ಕೆ ಬಂದ ವೇಳೆ ಕೆಲವು ಮುಖಂಡರು ಮತ್ತು ಸದಸ್ಯರು ಕಾರ್ಯಕ್ರಮ ಉದ್ಘಾಟನೆ ಬೇಡ ಮುಂದುಡಿ ಎಂದು ಮತ್ತು ಕೆಲವು ಮುಖಂಡರು ಮತ್ತು ಸದಸ್ಯರು ಇಂದೇ ಉದ್ಘಾಟನೆ ಮಾಡಬೇಕೆಂದು ಹಠ ಹಿಡಿದಿರುವುದರಿಂದ ಈ ಕಟ್ಟಡವನ್ನು ಉದ್ಘಾಟನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಅನುದಾನ ಯಾವುದೇ ಇರಲಿ ಜನಪ್ರತಿನಿಧಿಗಳಾದ ನಾವು ಯಾವುದೇ ತಾರತಮ್ಯ ಮಾಡದೆ ಕೆಲವು ಪರ ವಿರೋದೆರುವುದು ಸಹಜ ಅದೆಲ್ಲವನ್ನು ಸರಿದೂಗಿಸಿಕೊಂಡು ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿರುತ್ತದೆ ಆದರೆ ಮುಂದಿನ ದಿನಗಳಲ್ಲಿ ಯಾದರೂ ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಹೋಗಿ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಕೆಲವು ಸದಸ್ಯರು ಮತ್ತು ಗ್ರಾಮದ ಮುಖಂಡರು ಗ್ರಾಮ ಸಭೆಯನ್ನು ಮಾಡಿಲ್ಲ ಗ್ರಾಮದ ಜನತೆಗೆ ತಿಳಿಸಿಲ್ಲ ಏಕಾಏಕಿ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿದ್ದು ಇದನ್ನು ಖಂಡಿಸುತ್ತೇವೆ ಎಂದು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರು.

ಪೋಲಿಸರ ಮಧ್ಯಪ್ರವೇಶ :- ಕಾರ್ಯಕ್ರಮ ಉದ್ಘಾಟನೆಯಲ್ಲಿ ಪ್ರತಿಭಟನೆಯಿಂದ ಗಲಾಟೆಯಾಗುವ ಸಂಭವವನ್ನರಿತ ಸಾಲಿಗ್ರಾಮ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಶಿಕುಮಾರ್ ಮತ್ತು ಕೆ ಆರ್ ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ನೇತೃತ್ವದಲ್ಲಿ ಪೊಲೀಸರ ರಕ್ಷಣೆಯೊಂದಿಗೆ ಗಲಾಟೆಗೆಳೆದ ಸದಸ್ಯರು ಮತ್ತು ಮುಖಂಡರನ್ನು ಎಚ್ಚರಿಸುವ ಜೊತೆಗೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರಿಂದ ಯಾವುದೇ ಗಲಾಟೆ ಮತ್ತು ಅನಾಹುತೂ ನಡೆಯದಂತೆ ಸೂಕ್ತ ಬಂದು ಬಸ್ತು ವ್ಯವಸ್ಥೆ ಮಾಡಿದ್ದರು.

ಶಾಸಕ ಡಿ ರವಿಶಂಕರ್ ಗೈರು :- ಶಾಸಕರಾದ ಡಿ ರವಿಶಂಕರ್ ಕ್ಷೇತ್ರದಲ್ಲಿದ್ದರೂ ಗ್ರಾಮ ಪಂಚಾಯತಿ ಉದ್ಘಾಟನೆಗೆ ಬಾರದೆ ಗೈರಾಗಿರುವುದು ಗ್ರಾಮಸ್ಥರ ವಿರೋಧಕ್ಕೆ ಕಾರಣವಾಗಿತ್ತು ಅಹ್ವಾನ ಪತ್ರಿಕೆಯಲ್ಲಿ ಅವರನ್ನೇ ಅಧ್ಯಕ್ಷತೆಗೆ ಹಾಕಿದ್ದರು ಅವರನ್ನು ಖುದ್ದಾಗಿ ಅಧ್ಯಕ್ಷರೇ ಆಹ್ವಾನವನ್ನು ನೀಡಿದರು ಅವರ ಕೆಲವು ಬೆಂಬಲಿಗರು ವಿರೋಧ ವ್ಯಕ್ತಪಡಿಸುದ್ದರಿಂದ ಕಾರ್ಯಕ್ರಮಕ್ಕೆ ಬರದೆ ದೂರ ಉಳಿದಿದ್ದು ಮಿರ್ಲೆ ಗ್ರಾಮ ಪಂಚಾಯಿತಿಯ ಬಹುತೇಕ ಸದಸ್ಯರು ಜೆಡಿಎಸ್ ಬೆಂಬಲಿತರೆ ಇರುವುದರಿಂದ ಗೈರು ಆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಯ ಅಧಿಕಾರವನ್ನು ಮಟಕ್ಕೂ ಗಳಿಸುವ ಹುನಾರ:- ಮಿರ್ಲೆ ಗ್ರಾಮ ಪಂಚಾಯತಿಯಲ್ಲಿ ಹಿಂದಿನಿಂದಲೂ ಜೆಡಿಎಸ್ ಬೆಂಬಲಿತರು ಅಧಿಕಾರ ನಡೆಸುತ್ತಿದ್ದು ಈಗ ಬಡ ಸಮುದಾಯದ ನಾನು ಅಧ್ಯಕ್ಷನಾಗಿರುವುದರಿಂದ ನನ್ನ ಅಧಿಕಾರವನ್ನು ಮಟಗುಗೊಳಿಸಲು ಪಂಚಾಯಿತಿ ಕಟ್ಟಡ ಉದ್ಘಾಟನೆಗೆ ಶಾಸಕರಿಂದ ಹಿಡಿದು ಅಧಿಕಾರಿ ವರ್ಗದವರ ಅನುಮತಿ ಪಡೆದು ಆಹ್ವಾನ ಪತ್ರಿಕೆ ಸೇರಿದಂತೆ ಎಲ್ಲಾ ವಿಷಯವನ್ನು ಶಿಷ್ಟಾಚಾರದ ಅನ್ವಯ ಮಾಡಿದ್ದರು ಕೆಲವರ ಒತ್ತಡಕ್ಕೆ ಮಣೆದು ಶಾಸಕರು ಗೈರು ಆಗುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೆ ತಡೆ ಒಡ್ಡಿದರು ಆದರೆ ವಿಧಾನ ಪರಿಷತ್ ಸದಸ್ಯರಾದ ಸಿಎನ್ ಮಂಜೇಗೌಡರು ಗ್ರಾಮ ಪಂಚಾಯಿತಿಯ ಕಟ್ಟಡವನ್ನು ಉದ್ಘಾಟಿಸುವ ಮೂಲಕ ಕಾರ್ಯಕ್ರಮ ಯಶಸ್ಸು ಗಳಿಸುವಂತೆ ಮಾಡಿದ್ದಾರೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲು ತಿಳಿಸಿದ್ದರು.

ಪೂರ್ವಿಕರ ಕಾಲದಿಂದಲೂ ಕಾವೇರಿ ನದಿಯ ಪಕ್ಕದಲ್ಲಿರುವ ಬತ್ತದ ಕಣಜ ಎಂಬ ಹೆಸರಿನಿಂದ ರಾರಾಜಿಸುತ್ತಿರುವ ಮಿಥಿಲಾ ನಗರದ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಕೆಲವು ವಿರೋಧದ ನಡುವೆಯೂ ಪೋಲಿಸ್ ಇಲಾಖೆಯ ಮುಂಜಾಗ್ರತೆ ಯಿಂದ ಎಲ್ಲಾ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲು ಉಪಾಧ್ಯಕ್ಷೆ ನೇತ್ರ ಸಂದೀಪ್ ಸದಸ್ಯರುಗಳಾದ ಅರುಣ್ ಕುಮಾರ್ ಮಂಜುಳಾ ಶರಾವತಿ ಮಂಗಳ ಮಾಜಿ ತಾಲೂಕ ಪಂಚಾಯತಿ ಸದಸ್ಯ ಶೋಭಾ ಕೋಟೆಗೌಡ ವಿಜಯಮ್ಮ ಮೀನಾಕ್ಷಿ ಹೊಸಟ್ಟಿ ರಘು,  ಮೋಹನ, ಮಂಜುನಾಥ್, ಕುನ್ನೇಗೌಡ, ಸೇರಿದಂತೆ ಇನ್ನಿತರ ರೂ ಭಾಗವಹಿಸಿದ್ದರು.