
ಮೈಸೂರು:- ಸಮರ್ಥನಂ ಅಂಗವಿಕಲರ ಸಂಸ್ಥೆಯ 29ನೇ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಆವರಣದಲ್ಲಿಂದು ವಿಕಲಚೇತನರಿಗೆ ವಿವಿಧ ಸಹಾಯಕ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶಿವರಾಮ ದೇಶಪಾಂಡೆ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ತಂತ್ರಜ್ಞಾನದ ಅವಶ್ಯಕತೆ ಇರುತ್ತದೆ. ಆದರೆ ವಿಶೇಷ ಚೇತನರಿಗೆ ಇನ್ನಷ್ಟು ಸುಧಾರಿತ ಹಾಗೂ ನೆರವಾಗುವ ತಂತ್ರಜ್ಞಾನದ ಅಗತ್ಯ ಹೆಚ್ಚಾಗಿದೆ. ತಂತ್ರಜ್ಞಾನದಿಂದ ಯಾರೂ ಹೊರತಲ್ಲ; ಎಲ್ಲರೂ ಅದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಸೀರೆನ್ ಇಂಡಿಯಾ ಪ್ರೈವೇಟ್ ಲಿಮಿಟೆಟ್ ಕಂಪನಿಯ ವ್ಯವಸ್ಥಾಪಕರಾದ ಸುನಾಗ್, ಸುರಭಿ ಶರ್ಮಾ, ಚಂದನಾ, ಪ್ರದೀಪ್, ಚೈತ್ರ ಕುಮಾರಿ ಹಾಗೂ ಮಾಂತೇಶ್ ಉಪಸ್ಥಿತರಿದ್ದರು.

ಮೈಸೂರು ವಿಭಾಗದ ಮುಖ್ಯಸ್ಥರಾದ ಶಿವರಾಜು ಎಂ., ಮೈಸೂರು ಸಮರ್ಥನಂ ಅಂಗವಿಕಲರ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಸಾಧನ ಸಲಕರಣೆಗಳ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕಾರ್ಯಕ್ರಮವು ವಿಶೇಷ ಚೇತನರ ಜೀವನದಲ್ಲಿ ತಂತ್ರಜ್ಞಾನ ಮತ್ತು ಸಹಾಯಕ ಸಾಧನಗಳ ಮಹತ್ವವನ್ನು ಒತ್ತಿಹೇಳುವ ಮೂಲಕ ಯಶಸ್ವಿಯಾಗಿ ನೆರವೇರಿತು





