News

News National and International

HOMENews

ಕಾವೇರಿ ತೀರದ ನೈಸರ್ಗಿಕ ಸೊಬಗಿನಲ್ಲಿ ಮೆರೆಯುವ ಶ್ರೀರಾಮಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಭಕ್ತರಿಂದ ಪೂಜೆ

ಪುರಾಣ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿರುವ ಶ್ರೀರಾಮಲಿಂಗೇಶ್ವ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಹಿನ್ನಲೆ ವಿಶೇಷ ಪೂಜೆ ನಡೆಯಲಿದೆ.

ವರದಿ :-ಹೊಸೂರು ಆನಂದ.

ಹೊಸೂರು :-ಚುಂಚನಕಟ್ಟೆ ಸಮೀಪದಲ್ಲಿರುವ ಶ್ರೀರಾಮಲಿಂಗೇಶ್ವರ ದೇಗುಲದ ಸನಿಹದಲ್ಲೇ ಜೀವ ನದಿ ಪವಿತ್ರ ಕಾವೇರಿಯ ನದಿ ಹರಿಯುತ್ತಿದೆ, ಹಚ್ಚ ಹಸಿರಿನ ಮರಗಿಡಗಳ ನೆರೆಯಲ್ಲಿ ಹಕ್ಕಿಗಳ ಚಿಲಿಪಿಲಿ ನಿನಾದ ಕಲರವ ಪ್ರವಾಸಿ ಪ್ರಿಯರ ತನುಮನ ತಣಿಸುವ ಸುಂದರ ಸೊಬಗಿನ ಪ್ರಕೃತಿ ನಡುವೆ ಇರುವ ಈ ದೇಗುಲ, ಕಷ್ಟ ಎಂದು ಬರುವ ಭಕ್ತಾದಿಗಳಿಗೆ ನೆರಳಾಗಿರುವ ಶ್ರೀಕ್ಷೇತ್ರ ಹಲವು ಚಾರಿತ್ರಿಕ ವಿಷಗಳನ್ನ ಹೊಂದಿದೆ,

ಕಾವೇರಿ ತಟದ ಶಾಂತಿ ಸ್ಪರ್ಶ: ಚುಂಚನಕಟ್ಟೆ ಶ್ರೀರಾಮಲಿಂಗೇಶ್ವರ ಕ್ಷೇತ್ರದ ವೈಭವ ಈ ಸ್ಥಳದ ಪುರಾಣ

ರಾವಣನಿಂದ ಅಪಹರಣಕ್ಕೊಳಗಾದ ಸೀತೆಯನ್ನು ಬಿಡಿಸಲು ಶ್ರೀರಾಮ ಹಾಗೂ ರಾವಣ ಇಬ್ಬರ ನಡುವೆ ನಡೆದ ಕಾಳಗದಲ್ಲಿ ಶ್ರೀರಾಮ ಬಿಟ್ಟ ಬ್ರಹ್ಮಾಸ್ತ್ರ ಎಂಬ ಬಾಣದಿಂದ ಹತನಾಗುತ್ತಾನೆ ಇದರಿಂದ ಶ್ರೀರಾಮನಿಗೆ ಬ್ರಹ್ಮ ಹತ್ಯೆ ಎಂಬ ದೋಷಕ್ಕೆ ಗುರಿ ಆಗುತ್ತಾನೆ,ತೃಣ ಬಿಂದು ಮುನಿಗಳ ಸಲಹೆಯಂತೆ ದೋಷ ಮುಕ್ತಿ ಹೊಂದಲು ಶ್ರೀರಾಮನು ಶಿವನ ಲಿಂಗವನ್ನು ಕಾವೇರಿ ನದಿಡದಲ್ಲಿ ಪ್ರತಿಷ್ಠಾಪಿಸಿ ಈಶ್ವರನ ಸ್ಮರಣೆ ಮಾಡುತ್ತ ಪೂಜಿಸಿರುವುದರಿಂದ ಈ ಶ್ರೀಕ್ಷೇತ್ರದ ದೇವಾಲಯಕ್ಕೆ ಶ್ರೀರಾಮ ಮತ್ತು ಈಶ್ವರ ಎರಡು ನಾಮದೊಂದಿಗೆ ಶ್ರೀರಾಮಲಿಂಗೇಶ್ವರ ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆಯಿತು ಎಂದು ಹೇಳಲಾಗಿದೆ,

ಇದನ್ನೂ ಓದಿ :-  ಮಗುವಿನ ಕುತ್ತಿಗೆಯಿಂದ ಸರ ಕಿತ್ತು ನುಂಗಿದ ಆರೋಪಿ ಆಸ್ಪತ್ರೆಯಲ್ಲಿ ನಿಗಾ

ರಾಜ್ಯದಲ್ಲಿಯೇ ಅತಿ ಎತ್ತರವಾದ ಶಿವಲಿಂಗಗಳಲ್ಲಿ ಒಂದಾಗಿರುವ ಸುಮಾರು 5000 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಶಿವಲಿಂಗವು ಎತ್ತರದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ ಇಷ್ಟು ದೊಡ್ಡ ಪ್ರಮಾಣದ ಶಿವಲಿಂಗವು ಕಾಣಸಿಗುವುದು ಬಹಳ ವಿರಳ.

ಪ್ರಶಾಂತ ವಾತಾವರಣದಲ್ಲಿ ಮನಸ್ಸಿಗೆ ಮುದ ನೀಡುವ ಹಕ್ಕಿಗಳ ಕಲರವ ನಡುವೆ ಇತಿಹಾಸ ಹೊತ್ತ ದೇಗುಲ, ಭಕ್ತರನ್ನು ಸೆಳೆಯುವ ತಾಣ

ಸೂರ್ಯ ಕಿರಣ ಪವಿತ್ರ ಕಾವೇರಿಯ ನದಿಯ ದಡದಲ್ಲಿ ಪುರಾತನ ಶೈಲಿಯಲ್ಲಿ ಶ್ರೀರಾಮಲಿಂಗೇಶ್ವರ ದೇವಾಲಯವು ಪೂರ್ವಾಭಿ ಮುಕವಾಗಿದ್ದು ಮಹಾಶಿವರಾತ್ರಿಯಲ್ಲಿ ದೇವಾಲಯಕ್ಕೆಲ್ಲ ವಿದ್ಯುತ್ ದೀಪಗಳಿಂದ ಶೃಂಗರಿಸಿ ಜಾಗರಣೆ. ಹರಿಕಥೆ. ಶಿವನಾಮ ಸ್ಮರಣೆ ನಡಿಯುವುದು.

ಜಾಗರಣೆಯ ಮಾರನೇ ದಿವಸ ಮುಂಜಾನೆ ರೇಷ್ಮೆ ಯಂತ ಸೂರ್ಯನ ಕಿರಣ ಶಿವಲಿಂಗದಮೇಲೆ ಬೀಳುವ ಧೃಶ್ಯ ವನ್ನು ನೋಡುವುದಕ್ಕೆ ಭಕ್ತ ಸಾಗರವೇ ಹರಿದು ಬರುವುದು ಈ ಕ್ಷೇತ್ರಕ್ಕೆ. ಪ್ರತಿ ಅಮಾವಾಸ್ಯೆ ದಿನಗಳಲ್ಲಿ ವಿಶೇಷ ಹೋಮ ಹವನ ಅಭಿಷೇಕ ಸೇರಿದಂತೆ ಹೂವಿನಿಂದ ಅಲಂಕರಿಸಿ ಲಿಂಗಕ್ಕೆ ಶಿವನ ಮುಖದ ಚಿನ್ನ ಲೇಪಿತ ಕವಚ ಹಾಕಿ ಪೂಜೆ ನಡೆಯುವುದು ಅಂದು ಸಾವಿರಾರು ಸಂಖ್ಯೆ ಯಲ್ಲಿ ಬರುವ ಭಕ್ತರಿಗೆ ಸಂಜೆವರೆಗೂ ದೇವಳ ಮತ್ತು ದಾನಿಗಳ ಸಹಕಾರದಿಂದ ಅನ್ನಸಂತರ್ಪಣೆ ನಡೆಯುವುದು.

ದೇವಾಲಯದ ಆವರಣದಲ್ಲಿ ನವಗ್ರಹ ದೇವಸ್ಥಾನ ಆಂಜನೇಯ ದೇವರ ಸನ್ನಿಧಿ ಬೃಹತ್ ಅಶ್ವತ ಕಟ್ಟೆ ಎಲ್ಲವೂ ಇದ್ದು ಚುಂಚನಕಟ್ಟೆ ಎಷ್ಟೇ ಪ್ರಾಮುಖ್ಯತೆಯನ್ನು ರಾಮಲಿಂಗೇಶ್ವರ ದೇವಾಲಯವು ಹೊಂದಿದೆ.

ದೇವಾಲಯವನ್ನು ಹಿಂದಿನಿಂದಲೂ ನಂಜುಂಡಸ್ವಾಮಿಯವರ ಕುಟುಂಬ ವರ್ಗ ನಡೆಸಿಕೊಂಡು ಬರುತ್ತಿದ್ದು ಪ್ರಸ್ತುತ ಅನಂತ ಸ್ವಾಮಿ ರವರ ಉಸ್ತುವಾರಿಯಲ್ಲಿ ಭಕ್ತಾದಿಗಳ ನೆರವಿನಿಂದ ಪ್ರತಿ ವರ್ಷ ಶಿವರಾತ್ರಿ ಹಬ್ಬ ಅದ್ದೂರಿಯಾಗಿ ನಡೆಸಲಾಗುತ್ತದೆ.

 

ಇದನ್ನೂ ಓದಿ :-  ಮೈಸೂರಲ್ಲಿ ಮೊಳಗಿದ ಹನುಮನಾಮ: 50 ಸಾವಿರಕ್ಕೂ ಹೆಚ್ಚು ಭಕ್ತರಿಂದ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ

1 46 47 48 49 50 63
Page 48 of 63